tag:blogger.com,1999:blog-51556640683893486512024-03-06T08:12:56.663+05:30ಮಾತು ಮೌನದ ನಡುವೆ.....ಮಾತಿನಿಂದ ಮೂಡುವ ಮೌನದ,ಮೌನದಲ್ಲೂ ಇಣುಕುವ ಮಾತಿನ ಬಗ್ಗೆ......ಹಾಗೂ ಇವುಗಳ ನಡುವೆ.....Radhika Nadahallihttp://www.blogger.com/profile/14941717773075156473noreply@blogger.comBlogger16125tag:blogger.com,1999:blog-5155664068389348651.post-83826728778729468242013-11-14T12:51:00.000+05:302013-11-14T12:51:05.270+05:30

ವೃತ್ತಾಂತ

ಮುತ್ತುವ ಮುಂದಾಲೋಚನೆಗಳಲಿ

ಮಾತ್ರ ಮಾಯುವ ದುಮ್ಮಾನಗಳು

ಗೋಗರಿಕೆಯ ಗದ್ದಲಕೆ

ದೀರ್ಘ ನೀರವದ

ಸಮಾಧಾನ

ಅಸ್ಥಿರಗಳ ಅರಿವು ಮೀಟುವ

ಅಪರಾವತಾರ

ಗಳಲಿ ಎದುರಾಗುವ ಸಂಜ್ಞೆ

೨

ಕಲೆವ ಕಾಲಕ್ಕೆ ಕಾಯುವ

ಆಟದಲೆ ಕಟ್ಟಿಕೊಳುವ

ಕ್ಷಣಗಳ ಸಾತತ್ಯ

ಉಕ್ಕುವಕ್ಕರೆಯಲಿ ಬಣ್ಣಿಸಿ

ಕರೆವ ನೋಟಕ್ಕೆ ನಿಲುಕು

ಹೇಳದ್ದೆಲ್ಲಾ ಅರಿವಾಗುವ

ಆ ಲೋಕವೇ ನೆಚ್ಚು

೩

ತಬ್ಬಲಿ ನನ್ನ ಇರುಳು

ನೀರವದಲ್ಲಿ ಶಬ್ದಗಳು

ಸಂತೈಸುವ ತೀವ್ರ ಮುದ್ದು

ಭಾವಗಳ ಚಕಿತ ಚಿತ್ರಣ

ತುಡಿವ ಭಾವವೊಂದು ಜೀವ

ತಣಿಸುತ

ಒಳಗೊಳಗೇ ನಮ್ಮ ಮಣಿಸುವಾಗ

ಮಿನುಗು ಕಾಂತಿಯೊಂದರ ವಿನಿಮಯ

ಒತ್ತು, ಕೊಂಬು, ತಲೆಗಟ್ಟು -

ದೀರ್ಘ .....

ದೊಡ್ಡ ಬಳಗದ ಕವಿತೆ

ನಿನ್ನ ಒಡನಾಟ ನಿರುಮ್ಮಳ

- ರಾಧಿಕಾ ನಡಹಳ್ಳಿ

(ಹೊಸದಿಗಂತ ೨೦೧೩ರ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟ)

Radhika Nadahallihttp://www.blogger.com/profile/14941717773075156473noreply@blogger.com0tag:blogger.com,1999:blog-5155664068389348651.post-72273181052181303482011-02-18T16:28:00.000+05:302011-02-18T16:28:14.684+05:30ಎಂದು ಕೊನೆ

ಅಡಿಗರ ಜನ್ಮದಿನದಂದು ಅವರ ಈ ಕವನ...

ಎಂದು ಕೊನೆ ? - ಹಾ - ಎಂದು ಕೊನೆ?

ಒಬ್ಬರನೊಬ್ಬರು ಕೊಂದು ಕಳೆವ ಕೊಲೆ

ಹಬ್ಬಕೆ ತಾ ಬರದೇನು ಕೊನೆ?

ಎಂದು ಕೊನೆ? - ಓ - ಎಂದು ಕೊನೆ ?

ಯುಗಯುಗದಿಂದಲು ಬಗೆಬಗೆಯಿಂದಲು

ನಗುವಿನೊಳೂ ಯಾತನೆಯೊಳಗೂ

ನರನೆದೆಯಾಳವನಳಲಿಪ ಅಳುಕಿದು ;

'ಬರದೆ ಕೊನೆ ? - ಇದ - ಕಿರದೆ ಕೊನೆ !'

ಎನಿಬರೊ ನರವರರೆದ್ದು ಬಂದು ಕಡೆ

ಕಡೆದರು ನರನೆದೆಯ;

ಹಾಲಾಹಲವೇ ಹರಿಯಿತು, ಮೊರೆಯಿತು ;

ಬಾರದೇನೊ ಅಮೃತ - ಎಂದಿಗೂ -

ಬಾರದೇನೋ ಅಮೃತ ?

ಮುಗಿಲಲಿ ಮೂಡಿದ ಒಲವಿನ ಕನಸು

ಮನಸಿಗಿಳಿಯಲಿಲ್ಲ - ಇಳಿದರು -

ನನಸನಾಳದಲ್ಲ !

ಅರಿವಿಗೂ ಇರಿವಿಗು ಇರುವೀ ಅಂತರ

ಕಳೆಯಲಾರದೇನೋ - ಎಂದಿಗು -

ಅಳಿಯಲಾರದೇನೋ !

ಎದೆಗು ಎದೆಗು ನಡುವಿದೆ ಹಿರಿಗಡಲು ;

ಮುಟ್ಟಲಾರೆವೇನೋ - ಸೇತುವೆ -

ಕಟ್ಟಲಾರೆವೇನೋ !

ನಡುವಿನ ತೆರೆಗಳ ಮೊರೆಹವೆ ಮಾನವ

ಜೀವಗಾನವೇನೋ - ದೇವನ -

ದಿವ್ಯಗಾನವೇನೋ !

ಒಬ್ಬರನೊಬ್ಬರು ನಂಬುವ ತುಂಬುವ

ಹಬ್ಬವು ಕಬ್ಬದ ಕಾದಂಬಿನಿಯಲಿ

ಮೂಡುವ ಮಸುಳುವ ಮಳೆಬಿಲ್ಲಾಯಿತೆ ?

ಮೊಳೆಯದೆ ಅದು ಎದೆಯಾಳದಲಿ ?

ಬೆಳೆಯದೆ ಅದು ನಮ್ಮೀ ಬಾಳಿನಲಿ ?

ತಿಳಿಯುವ ಹೃದಯದ ಈ ತಳಮಳಕೆ ,

ಬೆಳೆಯುವ ಬುದ್ಧಿಯ ಈ ಕಳವಳಕೆ ,

ಬಲಿಯುವ ನರಕುಲದೀ ಒಳ ರೋಗಕೆ

ಎಂದು ಕೊನೆ ? - ಹಾ - ಎಂದು ಕೊನೆ ?

ಒಬ್ಬರನೊಬ್ಬರು ಕೊಂದು ಕಳೆವ ಕೊಲೆ

ಹಬ್ಬಕೆ ತಾ ಇರದೇನು ಕೊನೆ ?

ಎಂದು ಕೊನೆ ? - ಹಾ - ಎಂದು ಕೊನೆ ?

Radhika Nadahallihttp://www.blogger.com/profile/14941717773075156473noreply@blogger.com1tag:blogger.com,1999:blog-5155664068389348651.post-11798661952544235842011-01-25T20:36:00.000+05:302011-01-25T20:36:09.055+05:30ಗಡಿ-ಬಿಡಿ
ಸ್ವಲ್ಪ ಗಡಿಬಿಡಿ ನಿನಗೆ

ಎಂದು ದೂರು

ಊರ ಗಡಿ ದಾಟಿ ಬಂದ ಬಾಲ್ಯ

ಅರಿವಿದೆ ಗಡಿಯ ಬಗ್ಗೆ

ಗಡಿ ದಾಖಲೆಯಲ್ಲಿ- ಒಂದು ರೇಖೆ

ಆಚೊಂದು ಈಚೊಂದು

ಬೇರೆ ತೆರನಾದ ಹೆಸರಷ್ಟೇ

ಮತ್ತೆಲ್ಲ ಒಂದೇ ಸೂರ್ಯ ಅದೇ ಚಂದ್ರ

ಮೂಡು ಮುಳುಗು ಸಮಯ ಬದಲು

ಆಚಾರ ಸಂಸ್ಕೃತಿ ಆಹಾರ ಪದ್ಧತಿ

ಅಷ್ಟಿಷ್ಟು ಆಚೀಚೆ ತಲ್ಲಣವೆಂದರೆ ಅದೊಂದೇ

ಗಡಿಯ ಭೇದವಿಲ್ಲ

ಭಾವ ಬೇರೆಯಲ್ಲ ಭಾಷೆಯಂತೆ

ಹೌದು ಒಂದು ಗಡಿಯೊಳಗ ವಿಷಯ

ಬರೆಯ ಹೊರಟು ಅದರ ಗಡಿ ದಾಟಿದೆ

ಮನಸಿಗಾವ ಗಡಿ ರೇಖೆ ಎಳೆವ ಸಾಧನ

ಸೃಷ್ಟಿಯಲ್ಲುಂಟೇ?

ಅದು ಗಡಿಬಿಡಿಯಲ್ಲವೋ

ತೊರೆದ ಗಡಿಯ ಬಿಡದೇ

ಕಾಡುವ ನೆನಪ ಜೊತೆ

ಪ್ರಸ್ತುತದೊಟ್ಟಿಗಿನ ಸೆಣಸಾಟ

ಪಾಲಿಸಿದ ಅನಾಯಾಸ ಬೇಡದೇ

ಪಡೆದ ಶಾಪದ ವರವದು

ಬಹಳ ಹೆಚ್ಚೆನಿಸಿತೋ ಈ ಪ್ರವರ

ಇಲ್ಲಾ ಮೆಚ್ಚಿತೋ

(ಇಂದಿನ ಹೊಸದಿಗಂತದಲ್ಲಿ ಪ್ರಕಟವಾದ ಕವನ)

Radhika Nadahallihttp://www.blogger.com/profile/14941717773075156473noreply@blogger.com1tag:blogger.com,1999:blog-5155664068389348651.post-62183853103831766392010-11-01T13:09:00.000+05:302010-11-01T13:09:55.090+05:30ನಾನು

ಕನ್ನಡ ರಾಜ್ಯೋತ್ಸವದಂದು ಎಲ್ಲ ಕನ್ನಡದ ಮನಸ್ಸುಗಳಿಗೆ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಪ್ರೀತಿ ಕೇವಲ ಈ ದಿನಕ್ಕೆ ಮಾತ್ರ ಸೀಮಿತವಾಗಿರದೆ ಸದಾಕಾಲ ಪಸರಿಸುತಿರಲಿ.

೧

ವಿಶ್ವ ಮಾತೆಯ ಗರ್ಭಕಮಲಜಾತ-ಪರಾಗ-

ಪರಮಾಣು ಕೀರ್ತಿ ನಾನು !

ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟ

ನಿಂತಂಥ ಮೂರ್ತಿ ನಾನು !

೨

ಭಾರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ

ಮಿನುಗುತಿಹ ಜ್ಯೋತಿ ನಾನು !

ಕನ್ನಡದ ತಾಯಿ ತಾವರೆಯ ಪರಿಮಳವುಂಡು

ಬೀರುತಿಹ ಗಾಳಿ ನಾನು !

೩

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ

ಜೀವಂತ ಮಮತೆ ನಾನು !

ಈ ಐದು ಐದೆಯರ ಪಂಚಪ್ರಾಣಗಳಾಗಿ

ಈ ಜೀವ ದೇಹನಿಹನು !

೪

ಹೃದಯಾರವಿಂದದಲ್ಲಿರುವ ನಾರಾಯಣನೆ

ತಾನಾಗಿ ದತ್ತ ನರನು !

ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ

ಅಂಬಿಕಾತನಯನಿವನು !

- ದ. ರಾ. ಬೇಂದ್ರೆ

Radhika Nadahallihttp://www.blogger.com/profile/14941717773075156473noreply@blogger.com0tag:blogger.com,1999:blog-5155664068389348651.post-87533731317483901622010-08-20T19:24:00.000+05:302010-08-20T19:24:50.413+05:30ಬೇರಿನ ಭದ್ರತೆಸ್ವಂತವಲ್ಲದ ಪರಿಸರದಲ್ಲಿ ಸೌಹಾರ್ದಯುತ ಸಂಬಂಧಗಳ ಬಯಸಿ,

ಮನದ ತುಂಬೆಲ್ಲ ಅದರ ಸೌಗ೦ಧವ ಕಲ್ಪಿಸಿ,

ಕೊನೆಗದು ಕೇವಲ ಕಲ್ಪನೆಯೆಂದು ಅನಿಸಿ,

ಭಾವಬಿ೦ದುಗಳ ಜೋಡಿಸುವ ಹಂಬಲದಲ್ಲಿ

ಜೀವದ ಬೇರನ್ನು ಅರಸಿ,

ಹೋದೆ ನಾನು ಮತ್ತದೇ ಬಯಕೆಯಲ್ಲಿ...

ಅಂತೂ ಸೌಹಾರ್ದಯುತ ಸಂಬಂಧಗಳ ಕೊಂಡಿ ಸಿಕ್ಕಿತು,.

ಅದೂ ಜೀವದ ಬೇರಿನ ಬುಡದಲ್ಲಿ...

ಕಲ್ಪನೆ, ಅದು ಕಲ್ಪನೆಯಾಗಿ ಉಳಿದಿಲ್ಲ ವಾಸ್ತವತೆಯೊಟ್ಟಿಗೆ ಮಿಳಿತಗೊ೦ಡಿದೆ

ಭಾವ ಬಿಂದುಗಳ

ಜೋಡಣೆಯ ಕಾರ್ಯದಲಿ ಮಗ್ನಳಾಗಿ ಮನ ಪುಳಕಗೊಂಡಿದೆ ....Radhika Nadahallihttp://www.blogger.com/profile/14941717773075156473noreply@blogger.com2tag:blogger.com,1999:blog-5155664068389348651.post-41242730959659269192010-04-01T22:43:00.003+05:302010-06-05T16:35:04.085+05:30ವಿಮೋಚನೆಬಣ್ಣಗಳನು ನೋಡುವ ಹಂಬಲವಿತ್ತು ನನ್ನಲ್ಲಿ,
ಆದರೆ ಕಣ್ಣಿಗೆ ಪೊರೆ ಬಂದು
ಅವಕಾಶವಂಚಿತಳಾಗಿದ್ದೆ.
ಪೊರೆಯನು ತೆಗೆಯಲು ಕಾತುರಳಾಗಿದ್ದೆ
ಸಹಾಯ ಹಸ್ತಕಾಗಿ ಕಾಯುತಾ
ಆಶಾವಾದಿಯಾಗಿದ್ದೆ.
ಕೊನೆಗೂ ನನ್ನ ನಿರೀಕ್ಷೆ ಫಲಿಸಿತು:
ಆ ಅಮೃತ ಹಸ್ತ ಬಂದು ನನಗೊದಗಿದ್ದ
ತಾತ್ಕಾಲಿಕ ಪೊರೆಯನು
ಶಾಶ್ವತವಾಗಿ ನಾಶ ಮಾಡಿ ಬಣ್ಣದ ಲೋಕಕ್ಕೆ ಕರೆದೊಯ್ಯಿತು.
ಇಂತಹ ಸುಯೋಗವನು ನನ್ನ ಪಾಲಿಗೆ
ಹೊತ್ತು ತಂದ ಆ ಹೃದಯ
ಎಂದಿಗೂ ನನಗೆ ವಿಸ್ಮಯದ ಬಣ್ಣದ
ಲೋಕ...

( ಈ ವಾರದ ಮಣ್ಣಿನ ವಾಸನೆಯಲ್ಲಿ ಪ್ರಕಟವಾದ ಕವನ)Radhika Nadahallihttp://www.blogger.com/profile/14941717773075156473noreply@blogger.com1tag:blogger.com,1999:blog-5155664068389348651.post-11917167997593854372009-12-12T15:01:00.002+05:302009-12-12T19:55:25.432+05:30ವಿಮರ್ಶೆRadhika Nadahallihttp://www.blogger.com/profile/14941717773075156473noreply@blogger.com0tag:blogger.com,1999:blog-5155664068389348651.post-10470572309171427302009-09-11T19:28:00.000+05:302009-09-11T19:29:03.726+05:30ಸ್ವಯಂ ಬೀಳ್ಕೊಡುಗೆವಿದಾಯ...ಹಾಗೆ ಸಣ್ಣದೊಂದು ನೋವು
ಅಲ್ಲ ವಿದಾಯ ಸಣ್ಣದಾಗಿ ಕಾಣಿಸುವ
ಆದರೆ ಆಳ ಅಗಲ ತಿಳಿಯದ
ಅಳತೆ ಮಾಡಲಾಗದ ಅನು-ಭಾವ!
ಮುಂದಿನ ಭೇಟಿಯವರೆಗೂ
ಮನಸ ಆವರಿಸುವ,ಉರಿಸುವ
ನೆನಪ ಸ್ಫುರಿಸುವ
ಆಗಾಗ ತಳಮಳ ಬರಿಸುವ
ವಿ-ವರಿಸಲಾಗದ ಮೌನ ಸೃಷ್ಟಿಸುವ ಪರ್ವ ಈ ವಿದಾಯ...Radhika Nadahallihttp://www.blogger.com/profile/14941717773075156473noreply@blogger.com11tag:blogger.com,1999:blog-5155664068389348651.post-29285544065049838422009-04-21T13:46:00.004+05:302009-04-22T13:08:15.612+05:30ಹಾರದ ನಿರೀಕ್ಷೆಸಿದ್ಧಪಡಿಸಿಕೊಂಡೆ ಸಡಗರದಿಂದ ಸುಂದರವಾದ ಪದಗಳ
ಮುತ್ತಿನಂತೆ ಪೋಣಿಸಿಟ್ಟುಕೊಂಡೆ

ತೊಡಿಸಿಕೊಳ್ಳಲು ಸಿಗುತ್ತಿಲ್ಲ ನಿನ್ನ ಕೊರಳು
ಅರ್ಥಾತ್ ನನ್ನಿಂದ ಸೃಷ್ಟಿಸಿಕೊಂಡ ಪದಗಳು
ನಿನ್ನ ಕರ್ಣಕ್ಕೆ ತಮ್ಮ ತಲುಪಿಸಿಕೊಳ್ಳಲು ಸಾಧ್ಯವಾಗದೇ;
ಸ್ವಕರುಣೆಯಿಂದ ಸೊರಗುತ್ತಿವೆ ತಮ್ಮಷ್ಟಕ್ಕೆ
ಅವೆಲ್ಲಾ ಕರಗಿ ಹೋಗುವ ಮುನ್ನ ಒಮ್ಮೆ ನೀನೆ ಕರುಣೆ ತೋರಬಾರದೇ...?

ನಿನ್ನ ಕೊರಳ ಮೌನದ ನಕಲಿ ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ ಅಸಲಿ ಮಾತಿನ ಮುತ್ತಿನ ಹಾರ

ಕರುಳಿಂದ ಬಂದ ಕೊರಗು, ನೆನಪಿಂದ ಬಂದ ನಲಿವು
ಹಾಗೂ ಇದರ ಅದಲು ಬದಲು ಎಲ್ಲ ಸೇರಿ ಹಾರವಾಗಿದೆ
ಭಾವಗಳೇ ಇದ ಪೋಣಿಸಲು ದಾರವಾಗಿದೆ...

ನಿನ್ನದೇ ಕೊರಳಿಗಾಗಿ ಕಾದುಕೊಂಡಿದೆ ಇನ್ನೂ ತಡಮಾಡಬೇಡ
ದಾರ ಲಡ್ಡಾದೀತೆಂಬ ಭಯ ಶುರುವಾಗಿದೆ!

ಆಭರಣ ಪೆಟ್ಟಿಗೆಯಲ್ಲಿ ಜತನದಿಂದಿರಿಸಿರುವೆ ಹಾರವ
ನಿನ್ನ ಕೊರಳೇ ತಮ್ಮ ಭದ್ರ ಸ್ಥಾನ ಎಂಬ ಭಾವದಲ್ಲಿ ಕಾದಿವೆ ಮಾನವ...Radhika Nadahallihttp://www.blogger.com/profile/14941717773075156473noreply@blogger.com12tag:blogger.com,1999:blog-5155664068389348651.post-72162287999243625392009-04-03T16:32:00.008+05:302009-04-21T13:18:42.366+05:30ಶ್ರೀರಾಮ ನವಮಿಯ ದಿವಸಶ್ರೀರಾಮ ನವಮಿಯ ದಿವಸ ಅಡಿಗರ "ಶ್ರೀರಾಮ ನವಮಿಯ ದಿವಸ" ಪದ್ಯ ಇಲ್ಲಿದೆ...ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು

ಶ್ರೀರಾಮ ನವಮಿಯ ದಿವಸ ರಾಮನಾಮಾಮೃತವೆ
ಪಾನಕ,ಪನಿವಾರ, ಕೋಸಂಬರಿ ;
ಕರಬೂಜ ಸಿದ್ದೋಟುಗಳ ಹೋಳು,ಸೀಕರಣೆ ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ;

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ -
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು :
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು .

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ :
ಅಶ್ವಥ್ಥದ ವಿವರ್ತ ನಿತ್ಯ ಘಟನೆ ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯ ಕಾರಣದೊಂದಪೂರ್ವ ನಟನೆ .

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವನೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ,ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ .

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ :

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ
ಆಸ್ಫೋಟಿಸಿತ್ತು ಸಿಡಿತಲೆ ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟುನಿಂತ ಘಟನೆ ;

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಗೆವ ರಾಜಹಂಸ ;
ಅಂತರಂಗದ ಸುರಳಿ ಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ

ಸಂಕಲ್ಪದಿಂದ ಜಾಗರಣೆ ; ಕತ್ತಲಿನೆದೆಗ
ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;

ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆ ಮುಟ್ಟೆನೆ೦ಬುಡಾಫೆ

ವಿಜೃಂಭಿಸಿತು ರಾಮಬಾಣ ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ ;
ಕತ್ತರಿಸಿದರೆ ಬೆಳೆವ ; ಬೆಳೆದು ಕತ್ತಿಗೆ ಬರುವ
ಅನಾದಿ; ಕೋದ೦ಡ ದ೦ಡವೂ ಹೀಗೆ ದ೦ಡ ;

ಅಥವಾ ಚಕ್ರಾರಪ೦ಕ್ತಿ ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊ೦ಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕ೦ಪಿಸುತ್ತ .

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?Radhika Nadahallihttp://www.blogger.com/profile/14941717773075156473noreply@blogger.com8tag:blogger.com,1999:blog-5155664068389348651.post-28601377485403129682009-03-26T23:36:00.002+05:302009-03-26T23:54:07.794+05:30ನೆನಪಿನ ತುಣುಕುಗಳು...ಯುಗಾದಿಯ ಸಮಯದಲ್ಲಿ ಒಂದು ಪೋಸ್ಟಿಂಗ್ ಮಾಡಣ ಅಂತ ಅನ್ನಿಸ್ತು, ಆದರೆ ಹೊಸ ಬರಹ ಏನಲ್ಲ ಎಲ್ಲೋ ಬರೆದಿಟ್ಟಿದ್ದ ಕೆಲವು ಸಾಲುಗಳನ್ನೇ ಇಲ್ಲಿ ಪ್ರಕಟಿಸುತ್ತಿದ್ದೇನೆ,ಪ್ರಕಟಿಸುವ ಉತ್ಸಾಹಕ್ಕಾಗಿ... :-)

*ಕರಿ ನೆರಳಿನಿಂದ ದೂರ ಸರಿದು ಹೊಸ ಬೆಳಕ ಕಣ್ಣಲಿ ತುಂಬಿಕೊಳ್ಳಲು
ಜೀವನದ ಕನಸ ಕನಸಿಸಲು ಕೂಡಿ ಬಂದ ಸಮಯ...

*ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ ,ಇಂದಿಗೂ ಅದನ್ನು
ಜೀವಂತವಾಗಿರಿಸಲು ಉತ್ಸುಕಳಾಗಿರುವೆ,ಅದಕ್ಕಾಗಿ ಆಗಾಗ ನಿನ್ನ ಪ್ರತಿಕ್ರಿಯೆಯ ಬಯಸುತ್ತಿರುವೆ ...

*ಕಣ್ಣೊಳಗಿನ ಕನಸ ಕಣ್ಣ ಹೊಳಪಾಗಿಸು, ಬದುಕ ಬೆಳಕಾಗಿಸು
ಮನದೊಳಗಿನ ಪ್ರೀತಿಯ ಬದುಕ ಸ್ಫೂರ್ತಿಯಾಗಿಸು,ಜೀವನದ ಆದ್ಯತೆಯಾಗಿಸು...

*ಸೂರ್ಯರಶ್ಮಿ ಪ್ರಖರತೆ ಸಾಕೇ ಕಣ್ಣ ಪೊರೆ,
ತೆರೆಸಲು ಮನದ ಬಣ್ಣ ಅರಿಯಲು...
ಹಿತವಾದ ಎಲೆ ಬಿಸಿಲೋ ಅಥವಾ ಸುಡುವ ಬಿರು ಬಿಸಿಲೋ.....?
ಯಾವುದು ಚೆನ್ನ ನೀನೆ ಹೇಳು....Radhika Nadahallihttp://www.blogger.com/profile/14941717773075156473noreply@blogger.com6tag:blogger.com,1999:blog-5155664068389348651.post-18890520366039269562009-03-01T12:09:00.002+05:302009-03-01T12:29:30.231+05:30ನಾಪತ್ತೆ-ಹೀಗೊಂದು ಪ್ರಕಟಣೆ!ನಾನು ಬ್ಲಾಗ್ ಬರೆಯದೇ ತುಂಬ ದಿನವಾಯಿತು,ಬರೆಯಲು ಸಾಧ್ಯವಾಗಿಲ್ಲ ಎಂಬುದು ಕಾರಣ ಅಲ್ಲ,ಆದರೆ ಬರೆಯಲು ಶುರು ಮಾಡಿದ್ದನ್ನು ಪೂರ್ತಿ ಮಾಡಲು ಆಗಿಲ್ಲ...ಆದರೆ ಅಡಿಗರ ಜನ್ಮದಿನದ ಸಂದರ್ಭದಲ್ಲಿ ಅವರ ಕವನವನ್ನ ಇಲ್ಲಿ ಪ್ರಕಟಿಸಿದೆ...ಮೊದಲ ಕಾರಣ ಅವರ ಜನ್ಮದಿನ,ಎರಡನೆಯದು ನನ್ನ ಬ್ಲಾಗ್ ಅಪ್ಡೇಟ್ ಮಾಡುವುದು :-)

ಈಗಿನ ಬರಹದ ವಿಷಯ ಇದಲ್ಲ,ಆದರೂ ವಿಷಯ ಪ್ರಸ್ತಾಪ ಮಾಡಿದ್ದೇನೆ ಅಷ್ಟೆ...

ವಿಷಯ ಏನಪ್ಪಾ ಅಂದರೆ ನಾನು ಬ್ಲಾಗ್ ಪ್ರಾರಂಭ ಮಾಡಿ ಹತ್ರ ಹತ್ರ ೩ ತಿಂಗಳು ಆಗ್ತಾ ಬಂತು,ಈ ಅವಧಿಯಲ್ಲಿ ನನ್ನ ಬ್ಲಾಗ್ ಹಿಮ್ಬಾಲಿಸುವವರ ಸಂಖ್ಯೆ ೭ಕ್ಕೆ ತಲುಪಿದೆ...ಇದು ನನಗಂತೂ ಖುಷಿಯ ವಿಷಯ :-)
೧ರಿನ್ದ ಆರಂಭವಾದ ಹಿಂಬಾಲಕರ ಅಂಕಿ ಮೊನ್ನೆ ೭ಕ್ಕೆ ತಲುಪಿದಾಗ ನನಗೆ ಸಂತಸ ಆಗಿದ್ದು ಸುಳ್ಳಲ್ಲ...ಆದರೆ ನೆನ್ನೆ ನೋಡ್ತೀನಿ ಹಿಂಬಾಲಕರೆಲ್ಲ ನಾಪತ್ತೆ!! ಮತ್ತೊಮ್ಮೆ ಪರಿಶೀಲನೆ ಮಾಡಿದೆ,ಬಹುಶ ನಾನೇ ಸರಿಯಾಗಿ ನೋಡಿಲ್ಲವೇನೋ ಎಂದು,ಉಹು ಇಲ್ಲ ಎಲ್ಲೂ ಹಿಂಬಾಲಕರು ಕಾಣುತ್ತಿಲ್ಲ :(

ಇದು ಹೇಗಾಯಿತು ಯಾಕಾಯಿತು ನನಗೆ ಅರ್ಥವಾಗುತ್ತಿಲ್ಲ,ಒಟ್ಟಿನಲ್ಲಿ ಇದೊಂದು ನಿಗೂಢದಂತೆ ಭಾಸವಾಗುತ್ತಿದೆ!!
ತಾಂತ್ರಿಕ ದೋಷವಿರಬಹುದು...

ಇದನ್ನು ಓದಿದವರಲ್ಲಿ ಈ ಹಿಂದೆ ನನ್ನ ಬ್ಲಾಗ್ನ ಹಿಂಬಾಲಕರಾಗಿದ್ದವರು ಇದ್ದರೆ ,ಪುನಃ ಹಿಂಬಾಲಕರಾಗಬಹುದು...ಆಗದಿದ್ದವಾರು ಇನ್ನು ಮುಂದೆ ಇಷ್ಟವಾದರೆ ಆಗಬಹುದು.

-ಇಂತಿ ಸಿಂಚನRadhika Nadahallihttp://www.blogger.com/profile/14941717773075156473noreply@blogger.com8tag:blogger.com,1999:blog-5155664068389348651.post-76477616396176803852009-02-18T18:48:00.004+05:302009-02-18T19:11:05.187+05:30ಮೋಹನ ಮುರಲಿಗೋಪಾಲ ಕೃಷ್ಣ ಅಡಿಗರ ಜನ್ಮ ದಿನದಂದು, ಅವರ ಜನಪ್ರಿಯ ಕವಿತೆಗಳಲ್ಲಿ ಒಂದಾದ ಹಾಗೂ ನನಗೆ ಇಷ್ಟವಾದ ಕವನ...ಇಲ್ಲಿದೆ...

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಕರೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ ;
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋನ್ಕಿನ ಪಂಜರ ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರಳದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ ?

ವಿವಶವಾಯಿತು ಪ್ರಾಣ ; ಹಾ! ಪರವಶವು ನಿನ್ನಿ ಚೇತನ ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ?

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಡಿ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು ?Radhika Nadahallihttp://www.blogger.com/profile/14941717773075156473noreply@blogger.com7tag:blogger.com,1999:blog-5155664068389348651.post-58807413802337289412009-01-09T19:01:00.003+05:302009-01-09T22:47:59.329+05:30ಸಮ್ಮೋಹನನಾ ಅಂದು ಬರೆದ ಪ್ರತಿಯೊಂದು ಪದಕ್ಕೂ,
ಇಂದು, ಮುಂದು, ಎಂದೆಂದೂ ಬರೆಯುವ ಪ್ರತಿ ಪದಕ್ಕೂ ನೀನೆ ಕಾರಣ.
ನನ್ನ ನಿರೀಕ್ಷೆಯ ನಿಧಿಯ ನನಸಾಗಿಸಿದ ನೀನೆ,
ನನ್ನಲ್ಲಿ ಮೂಡುವ ಭಾವಗಳ, ಅಕ್ಷರಗಳಾಗಿಸುವ ಕ್ರಿಯೆಯ ಮೂಲ ಪ್ರೇರಣ.
ಬರೆಯಬೇಕೆನಿಸುವ ಭಾವಗಳ ಮನದೊಳಗೆ ಬಿತ್ತಿದ ಬೆಳೆಗಾರ,
ಕನಸಿಸಲು ಅದ ಕಾವ್ಯವಾಗಿಸಲು ತನ್ಮೂಲಕ,
ತರಬೇತಿಯಿಲ್ಲದೆ ಮನದ ತಳದಲ್ಲೇ ಉಳಿದುಹೋಗುತ್ತಿದ್ದ ಭಾವ ತಿಲ್ಲಾನಗಳ
ಗೆಜ್ಜೆಕಟ್ಟಿ ರಂಗದ ಮೇಲೆ ಕುಣಿಸಲು ಕಲಿಸಿದ ಕಲೆಗಾರ...
Radhika Nadahallihttp://www.blogger.com/profile/14941717773075156473noreply@blogger.com17tag:blogger.com,1999:blog-5155664068389348651.post-19247948334914347992008-12-23T22:34:00.005+05:302008-12-28T00:14:01.636+05:30ಒಂದು ಕನಸಿನ ಕತೆ (ನಿಜವಾಗಿಯೂ ಆಗಬಹುದಾದ, ಆಗಬೇಕಾದ ಕತೆ )ನಾ ಈಗ ಒಂದು ಕನಸಿನ ಬಗ್ಗೆ ಬರಿತಾ ಇದೀನಿ. ಈ ಕನಸು ನೆನ್ನೆ ಮಧ್ಯ ರಾತ್ರಿ ಇಂದ ಇವತ್ ಬೆಳಿಗ್ಗೆ ತನಕ ಬೀಳ್ತಾ ಇತ್ತು. ಕನಸು ತುಂಬ ದೊಡ್ಡದೇನಲ್ಲ, ಆದ್ರೆ ಮಧ್ಯೆ ಮಧ್ಯೆ ನಿತ್ಹೊಗ್ತಾ ಇತ್ತು,ಸ್ಪೀಡ್ ಆಗಿ ಹೋಗ್ತಾ ಇರೋ ಬೈಕ್ ಸಡನ್ ಅಂತ ಟ್ರಾಫಿಕ್ನಲ್ಲಿ ಸಿಕ್ಹಾಕ್ಕೊಂಡು ಸ್ಟಾಪ್ ಆಗತ್ತಲ್ಲ ಆ ತರಹ.ಬೆಳಗೆ ಬೇಗ ಎಚ್ಚರ ಆಗಿತ್ತು ಆದ್ರೆ ಕನಸು ಇನ್ನು ಮುಗ್ದಿರ್ಲಿಲ್ಲ, ಅದ್ಕೆ ಮತ್ತೆ ಮುಸುಕು ಹಾಕಿ ಮಲಗದೆ.ಕನಸು ಮತ್ತೆ ಮುಂದುವರಿತು...ಇನ್ನು ಕನಸಿನ ಬಗ್ಗೆ ಹೇಳ್ತೀನಿ...ವಿಚಿತ್ರ ಅನ್ನಿಸಬಹುದು...ಕನಸು ಒಬ್ಬ   ಕಾಂಟ್ರಾಕ್ಟರ್ ಕ೦ ರಿಯಲ್ ಎಸ್ಟೇಟ್ ಅವ್ನ ಬಗ್ಗೆ.
ಅವನು ಒಬ್ಬ ದೈವೀ ಭಕ್ತ,ಅದು ಸಹಜ ಕೂಡ. ಎಲ್ಲ ರಿಯಲ್ ಎಸ್ಟೇಟ್ ಬಿಸಿನೆಸ್ ಅವ್ರು ದೈವೀ ಭಕ್ತರೇ, ಇತ್ತೀಚೆಗೆ ಅವ್ರು ಮಾಡಿದ ಕೆಲಸದ ಬಗ್ಗೆ ಪಾಪಪ್ರಜ್ಞೆ ಕಾಡತ್ತೋ ಏನೋ,ಅದಕಾಗಿ ದೈವೀ ಭಕ್ತರಾಗಿರಬಹುದು ಅಲ್ಲ ಅಲ್ಲ ಆ ತರಹ ಸೋಗು ಹಾಕ್ತಾರೆ ಅಷ್ಟೆ.ನನಗ್ಯಾಕೆ ಹೋಗಿ ಹೋಗಿ ಈ ಕಾಂಟ್ರಾಕ್ಟರ್ ಕಂ ರಿಯಲ್ ಎಸ್ಟೇಟ್ ಅವ್ರ ಬಗ್ಗೆ ಕನಸು ಬಿತ್ತೋ ಏನೋ,ಆದ್ರೆ ಕನಸು ಬೀಳದು ನನ್ ಕೈಲಿ ಇಲ್ವಲ ಸೊ ಸುಮ್ನೆ ಕನಸನ್ನ ಕಾಣ್ತಾ ಹೋದೆ.ಕನಸಲ್ಲಿ ಅವ್ನು ಒಂದು ಫ್ಯಾಮಿಲಿನ ಕೆಲಸಕ್ಕೆ ಇಟ್ಕೊಂಡಿರ್ತಾನೆ ಅಂದ್ರೆ ಅವ್ರು ಅವ್ನ ಮನೇಲೆ ಇರ್ತಾರೆ ಕೆಲಸ ಮಾಡ್ಕೊಂಡು,ಅಪ್ಪ ಅವ್ರ ಮನೆ ದೇವರ ಪೂಜೆ ಮಾಡ್ತಾ ಇರ್ತಾರೆ, ಅಮ್ಮ ಅಡುಗೆ ಕೆಲಸ ಮಾಡ್ತಾ ಇರ್ತಾಳೆ. ಮಗನು ಇರ್ತಾನೆ ಆದ್ರೆ ಏನ್ ಮಾಡ್ತಿದ್ದ ಅಂತ ಕನಸಲ್ಲಿ ಸರ್ಯಾಗಿ ಗೊತ್ತಾಗ್ಲಿಲ್ಲ. ಒಟ್ಟ್ನಲ್ಲಿ ಸಂಘಟನೆ ಅಂತ ಅದ್ರ ಜೊತೆ ಇರ್ತಾನೆ,ಸಮಾಜ ಸೇವೆ ಮಾಡ್ತಾ ಇರ್ತಾನೆ.ಆದ್ರೆ ಮಗಂಗೆ ಅವ್ನ ಕಂಡ್ರೆ ಅಗ್ತಾ ಇರಲ್ಲ.ಒಂದ್ ದಿನ ಅವ್ನು (ರಿಯಲ್ ಎಸ್ಟೇಟ್ ಮನುಷ್ಯ),ದೇವಸ್ಥಾನ ಕಟ್ಟೊದ್ರ ಬಗ್ಗೆ ಪ್ಲಾನ್ ಮಾಡ್ತಾನೆ,ಆದ್ರೆ ಅದ್ಕೆ ತುಂಬಾ ಸಮಯ ಆಗತ್ತೆ ಅಂತ ಒಂದು ದೀವಸ್ಥಾನಾನ ಖರೀದಿ ಮಾಡೋದ್ರ ಬಗ್ಗೆ ಯೋಚನೆ ಮಾಡ್ತಾನೆ ಕೊನೆಗೆ ಅದನ್ನೇ ಕಾರ್ಯರೂಪಕ್ಕೆ ತರ್ತಾನೆ.
ಮನೆನಲ್ಲಿ ಪೂಜೆ ಮಾಡ್ತಾ ಇದ್ದವ್ನೆ ದೇವಸ್ಥಾನದ ಪೂಜೆಗೆ ನೀಮಿಸ್ತಾನೆ. ಆದ್ರೆ ಅವ್ನಿಗೆ ಕೆಲವೊಂದು ಷರತ್ತು ಹಾಕ್ತಾನೆ, ಬರಿ ಪೂಜೆ ಮಾತ್ರ ಮಾಡದಲ್ಲ ಜೊತೆಗೆ ಕೆಲವೊಂದು ಪವಾಡ ಮಾಡಬೇಕು ಅಂತ,ಆದ್ರೆ ಅವ್ನಿಗೆ ಅದು ಇಷ್ಟ ಇರಲ್ಲ, ಆದ್ರೆ ಅವ್ನ ಪರಿಸ್ಥಿತಿ ಅವನನ್ನ ದ್ವಂದ್ವಕ್ಕೆ ತಲ್ಲತ್ತೆ.ದುಡ್ಡಿಗೋಸ್ಕರ ಇಂತಹ ಕೆಲಸ ಮಾಡಬೇಕಾ ಅಂತ..... ಅವ್ನು ಅದನ್ನ ತನ್ನ ಮಗನ ಹತ್ರ ಹೇಳ್ಕೊತಾನೆ.ಮಗ ತನ್ನ ತಂದೆ ದುಡ್ಡಿಗೋಸ್ಕರ ತನ್ನ ಆದರ್ಶನಾ, ತನ್ನ ಭಾವನೆಗಳನ್ನ ಬಳಿ ಕೊಡದು ಇಷ್ಟ ಪದೊದಿಲ್ಲ.ಅವ್ನು ಆ ರಿಯಲ್ ಎಸ್ಟೇಟ್ ಮನುಷ್ಯನ ವಿರುದ್ಧ್ಹ ಹೋರಾಟ ಮಾಡ್ತಾನೆ. ಅದ್ರಲ್ಲಿ ಜಯ ಗಳಿಸ್ತಾನೆ...
ಅವ್ನು ಜಯ ಗಳಿಸಕ್ಕು ನನ್ ಕನಸು ಮುಗ್ಯಕ್ಕು ಸರಿ ಆಯ್ತು. ಅಷ್ಟರಲ್ಲಿ ನಂಗೂ ಎಚ್ಚರ ಆಯ್ತು,ನೋಡ್ತೀನಿ ೯ ಘಂಟೆ ಆಗಿದೆ.ದಾದಾ ಬಡ ಅಂತ ಎದ್ದು ಓಡಿದೆ ,ಅಮ್ಮ ಕೂಗ್ತಾ ಇದ್ಲು ಬೇಗ ಎದ್ದು ರೆಡಿ ಆಗು, ಅಜ್ಜಿನ ನೋಡಕ್ಕೆ ಅತ್ತೆ ಮನೆಗೆ ಹೋಗ್ಬೇಕು ಅಂತ...
ಹೀಗೆ ಇವತ್ತಿನ ದಿನ(೨೩-೧೨-೦೮) ಶುರು ಆಗಿದ್ದು... ಆದ್ರೆ ತುಂಬ ಸಂತೋಷದ ಕ್ಷಣಗಳನ್ನ ಇವತ್ತು ಗಳಿಸ್ಕೊಂಡೆ...Radhika Nadahallihttp://www.blogger.com/profile/14941717773075156473noreply@blogger.com11tag:blogger.com,1999:blog-5155664068389348651.post-21418701282222672762008-12-02T16:03:00.001+05:302008-12-03T12:39:55.038+05:30ನೆನೆಸುನನ್ನೆದೆಯಲ್ಲಿ ಹೆಪ್ಪುಗಟ್ಟಿದ ಭಾವಗಳಿಗೆ
ಬಿಸಿ ತಾಕಿಸಿ
ಅವುಗಳನ್ನು ದ್ರವ ರೂಪದಲ್ಲಿ ಹರಿಸಲು ಕಾರಣ
ಈ ಶೀತಲ ವಾತಾವರಣದ ಹಿಮರಾಜRadhika Nadahallihttp://www.blogger.com/profile/14941717773075156473noreply@blogger.com4