Tuesday, April 21, 2009

ಹಾರದ ನಿರೀಕ್ಷೆ

ಸಿದ್ಧಪಡಿಸಿಕೊಂಡೆ ಸಡಗರದಿಂದ ಸುಂದರವಾದ ಪದಗಳ
ಮುತ್ತಿನಂತೆ ಪೋಣಿಸಿಟ್ಟುಕೊಂಡೆ

ತೊಡಿಸಿಕೊಳ್ಳಲು ಸಿಗುತ್ತಿಲ್ಲ ನಿನ್ನ ಕೊರಳು
ಅರ್ಥಾತ್ ನನ್ನಿಂದ ಸೃಷ್ಟಿಸಿಕೊಂಡ ಪದಗಳು
ನಿನ್ನ ಕರ್ಣಕ್ಕೆ ತಮ್ಮ ತಲುಪಿಸಿಕೊಳ್ಳಲು ಸಾಧ್ಯವಾಗದೇ;
ಸ್ವಕರುಣೆಯಿಂದ ಸೊರಗುತ್ತಿವೆ ತಮ್ಮಷ್ಟಕ್ಕೆ
ಅವೆಲ್ಲಾ ಕರಗಿ ಹೋಗುವ ಮುನ್ನ ಒಮ್ಮೆ ನೀನೆ ಕರುಣೆ ತೋರಬಾರದೇ...?

ನಿನ್ನ ಕೊರಳ ಮೌನದ ನಕಲಿ ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ ಅಸಲಿ ಮಾತಿನ ಮುತ್ತಿನ ಹಾರ

ಕರುಳಿಂದ ಬಂದ ಕೊರಗು, ನೆನಪಿಂದ ಬಂದ ನಲಿವು
ಹಾಗೂ ಇದರ ಅದಲು ಬದಲು ಎಲ್ಲ ಸೇರಿ ಹಾರವಾಗಿದೆ
ಭಾವಗಳೇ ಇದ ಪೋಣಿಸಲು ದಾರವಾಗಿದೆ...

ನಿನ್ನದೇ ಕೊರಳಿಗಾಗಿ ಕಾದುಕೊಂಡಿದೆ ಇನ್ನೂ ತಡಮಾಡಬೇಡ
ದಾರ ಲಡ್ಡಾದೀತೆಂಬ ಭಯ ಶುರುವಾಗಿದೆ!

ಆಭರಣ ಪೆಟ್ಟಿಗೆಯಲ್ಲಿ ಜತನದಿಂದಿರಿಸಿರುವೆ ಹಾರವ
ನಿನ್ನ ಕೊರಳೇ ತಮ್ಮ ಭದ್ರ ಸ್ಥಾನ ಎಂಬ ಭಾವದಲ್ಲಿ ಕಾದಿವೆ ಮಾನವ...

12 comments:

Ittigecement said...

ಸಿಂಚನಾ...

ಸುಂದರವಾದ ಕವನ...

ಕೆಲವು ಭಾವಗಳನ್ನು ಹೇಳಲು..
ಪದಗಳು ಸೋಲುತ್ತವೆ...

ಸೋಲುವ ಪದಗಳ
ಭಾವವನ್ನು
ಸಮರ್ಥವಾಗಿ
ಬಳಸಿದ್ದೀರಿ...

ಚಂದದ ಕವನಕ್ಕೆ
ಅಭಿನಂದನೆಗಳು...

ಪ್ರಕಾಶಣ್ಣ...

ಮೂರ್ತಿ ಹೊಸಬಾಳೆ. said...

ರಾಧಿಕಾ,
ಎಂದಿನಂತೆ ಮತ್ತೊಂದು ಉತ್ತಮ ಬರಹ.

ವಿನಾಯಕ ಕೆ.ಎಸ್ said...

ನಮಸ್ತೇ,
ಬ್ಲಾಗ್ ಮತ್ತು ಬರವಣಿಗೆ ಎರಡು ಚೆನ್ನಾಗ್ಗಿದೆ. ನೀವು ಸಾಗರದವರು ಅಂತಾ ಹೇಳಿದ್ರಿ ಅಲ್ವಾ? ನಡಹಳ್ಳಿ ಅಂದರೆ ಎಲ್ಲಿ ಬರತ್ತೆ? ನಾನು ಸಾಗರದ ಹತ್ರಾ ಎಲ್ಲೂ ಈ ಊರಿನ ಹೆಸರು ಕೇಳಿದಂತಿಲ್ಲ.
ವಿನಾಯಕ ಕೋಡ್ಸರ...

Radhika Nadahalli said...

ಧನ್ಯವಾದಗಳು...ನಡಹಳ್ಳಿ ಸೊರಬದ ಹತ್ರ...ಆದರೆ ಸಾಗ್ರದ್ಲ್ಲು ನೆಂಟರಿದ್ದಾರೆ... ಬ್ಲಾಗ್ ಕಡೆ ಬರುತ್ತಿರಿ...

Radhika Nadahalli said...

@ ಪ್ರಕಶಣ್ಣ
ಧನ್ಯವಾದಗಳು ಪ್ರಕಶಣ್ಣ ...

@ ಮೂರ್ತಿ
ಧನ್ಯವಾದಗಳು :-)

Aditya Bedur said...

ಕವನ ತುಂಭಾ ಚನ್ನಾಗಿದ್ದು...:)

Anonymous said...

ಕವಿತೆ ಚೆನ್ನಾಗಿದೆ..

Anonymous said...

ಸಿಂಚನಾ,
ಕನ್ನಡದ ಯುವ ಕವಿಗಳ ಫೋರಂ ಯುವಕವಿ(http://yuvakavi.ning.com) ಸೇರಿ..

umesh desai said...

ಸಿಂಚನಾ ನಿಮ್ಮ ಹೆಸರು ಛಂದ್ ಅದ ಹಂಗ ನಿಮ್ಮ ಕವಿತಾನೂ ಅಭಿನಂದನೆಗಳು...!

ಜಲನಯನ said...

ಸಿಂಚನ
ಪದ ಸಿಂಚನ ಕಳೆತುಂಬಿ ಬರುತ್ತಿದೆ..ಹೀಗೇ ಬರುತ್ತಿರಲಿ
ನಿಸರ್ಗದ ಹಚ್ಚನೆಯ ಹಸುರುಸಿರಾಡಿ ಬೆಳೆದ ಮನಗಳ ಭಾವಮಂಥನಾ ಸಾಮರ್ಥ್ಯ ಅದಮ್ಯ ಎನ್ನುವುದನ್ನು
ಈ ಚಿಕ್ಕ ವಯಸ್ಸಿನಲ್ಲೇ ಸಾದರಪಡಿಸುತ್ತಿದ್ದೀರಿ..ಮುಂದುವರೆಯಲಿ...ಹಾರೈಕೆಗಳು
ನನ್ನ ಗೂಡಿಗೂ ಒಮ್ಮೆ ಭೇಟಿನೀಡಿ...

ಜಿ.ಎಸ್.ಬಿ. ಅಗ್ನಿಹೋತ್ರಿ said...

ಚೆನ್ನಾಗಿದೆ. ಬರವಣಿಗೆ ಮುಂದುವರಿಯಲಿ..

Anonymous said...

You have not written for so many days!!

Powered By Blogger

Followers