Tuesday, December 23, 2008

ಒಂದು ಕನಸಿನ ಕತೆ (ನಿಜವಾಗಿಯೂ ಆಗಬಹುದಾದ, ಆಗಬೇಕಾದ ಕತೆ )

ನಾ ಈಗ ಒಂದು ಕನಸಿನ ಬಗ್ಗೆ ಬರಿತಾ ಇದೀನಿ. ಈ ಕನಸು ನೆನ್ನೆ ಮಧ್ಯ ರಾತ್ರಿ ಇಂದ ಇವತ್ ಬೆಳಿಗ್ಗೆ ತನಕ ಬೀಳ್ತಾ ಇತ್ತು. ಕನಸು ತುಂಬ ದೊಡ್ಡದೇನಲ್ಲ, ಆದ್ರೆ ಮಧ್ಯೆ ಮಧ್ಯೆ ನಿತ್ಹೊಗ್ತಾ ಇತ್ತು,ಸ್ಪೀಡ್ ಆಗಿ ಹೋಗ್ತಾ ಇರೋ ಬೈಕ್ ಸಡನ್ ಅಂತ ಟ್ರಾಫಿಕ್ನಲ್ಲಿ ಸಿಕ್ಹಾಕ್ಕೊಂಡು ಸ್ಟಾಪ್ ಆಗತ್ತಲ್ಲ ಆ ತರಹ.ಬೆಳಗೆ ಬೇಗ ಎಚ್ಚರ ಆಗಿತ್ತು ಆದ್ರೆ ಕನಸು ಇನ್ನು ಮುಗ್ದಿರ್ಲಿಲ್ಲ, ಅದ್ಕೆ ಮತ್ತೆ ಮುಸುಕು ಹಾಕಿ ಮಲಗದೆ.ಕನಸು ಮತ್ತೆ ಮುಂದುವರಿತು...ಇನ್ನು ಕನಸಿನ ಬಗ್ಗೆ ಹೇಳ್ತೀನಿ...ವಿಚಿತ್ರ ಅನ್ನಿಸಬಹುದು...ಕನಸು ಒಬ್ಬ ಕಾಂಟ್ರಾಕ್ಟರ್ ಕ೦ ರಿಯಲ್ ಎಸ್ಟೇಟ್ ಅವ್ನ ಬಗ್ಗೆ.
ಅವನು ಒಬ್ಬ ದೈವೀ ಭಕ್ತ,ಅದು ಸಹಜ ಕೂಡ. ಎಲ್ಲ ರಿಯಲ್ ಎಸ್ಟೇಟ್ ಬಿಸಿನೆಸ್ ಅವ್ರು ದೈವೀ ಭಕ್ತರೇ, ಇತ್ತೀಚೆಗೆ ಅವ್ರು ಮಾಡಿದ ಕೆಲಸದ ಬಗ್ಗೆ ಪಾಪಪ್ರಜ್ಞೆ ಕಾಡತ್ತೋ ಏನೋ,ಅದಕಾಗಿ ದೈವೀ ಭಕ್ತರಾಗಿರಬಹುದು ಅಲ್ಲ ಅಲ್ಲ ಆ ತರಹ ಸೋಗು ಹಾಕ್ತಾರೆ ಅಷ್ಟೆ.ನನಗ್ಯಾಕೆ ಹೋಗಿ ಹೋಗಿ ಈ ಕಾಂಟ್ರಾಕ್ಟರ್ ಕಂ ರಿಯಲ್ ಎಸ್ಟೇಟ್ ಅವ್ರ ಬಗ್ಗೆ ಕನಸು ಬಿತ್ತೋ ಏನೋ,ಆದ್ರೆ ಕನಸು ಬೀಳದು ನನ್ ಕೈಲಿ ಇಲ್ವಲ ಸೊ ಸುಮ್ನೆ ಕನಸನ್ನ ಕಾಣ್ತಾ ಹೋದೆ.ಕನಸಲ್ಲಿ ಅವ್ನು ಒಂದು ಫ್ಯಾಮಿಲಿನ ಕೆಲಸಕ್ಕೆ ಇಟ್ಕೊಂಡಿರ್ತಾನೆ ಅಂದ್ರೆ ಅವ್ರು ಅವ್ನ ಮನೇಲೆ ಇರ್ತಾರೆ ಕೆಲಸ ಮಾಡ್ಕೊಂಡು,ಅಪ್ಪ ಅವ್ರ ಮನೆ ದೇವರ ಪೂಜೆ ಮಾಡ್ತಾ ಇರ್ತಾರೆ, ಅಮ್ಮ ಅಡುಗೆ ಕೆಲಸ ಮಾಡ್ತಾ ಇರ್ತಾಳೆ. ಮಗನು ಇರ್ತಾನೆ ಆದ್ರೆ ಏನ್ ಮಾಡ್ತಿದ್ದ ಅಂತ ಕನಸಲ್ಲಿ ಸರ್ಯಾಗಿ ಗೊತ್ತಾಗ್ಲಿಲ್ಲ. ಒಟ್ಟ್ನಲ್ಲಿ ಸಂಘಟನೆ ಅಂತ ಅದ್ರ ಜೊತೆ ಇರ್ತಾನೆ,ಸಮಾಜ ಸೇವೆ ಮಾಡ್ತಾ ಇರ್ತಾನೆ.ಆದ್ರೆ ಮಗಂಗೆ ಅವ್ನ ಕಂಡ್ರೆ ಅಗ್ತಾ ಇರಲ್ಲ.ಒಂದ್ ದಿನ ಅವ್ನು (ರಿಯಲ್ ಎಸ್ಟೇಟ್ ಮನುಷ್ಯ),ದೇವಸ್ಥಾನ ಕಟ್ಟೊದ್ರ ಬಗ್ಗೆ ಪ್ಲಾನ್ ಮಾಡ್ತಾನೆ,ಆದ್ರೆ ಅದ್ಕೆ ತುಂಬಾ ಸಮಯ ಆಗತ್ತೆ ಅಂತ ಒಂದು ದೀವಸ್ಥಾನಾನ ಖರೀದಿ ಮಾಡೋದ್ರ ಬಗ್ಗೆ ಯೋಚನೆ ಮಾಡ್ತಾನೆ ಕೊನೆಗೆ ಅದನ್ನೇ ಕಾರ್ಯರೂಪಕ್ಕೆ ತರ್ತಾನೆ.
ಮನೆನಲ್ಲಿ ಪೂಜೆ ಮಾಡ್ತಾ ಇದ್ದವ್ನೆ ದೇವಸ್ಥಾನದ ಪೂಜೆಗೆ ನೀಮಿಸ್ತಾನೆ. ಆದ್ರೆ ಅವ್ನಿಗೆ ಕೆಲವೊಂದು ಷರತ್ತು ಹಾಕ್ತಾನೆ, ಬರಿ ಪೂಜೆ ಮಾತ್ರ ಮಾಡದಲ್ಲ ಜೊತೆಗೆ ಕೆಲವೊಂದು ಪವಾಡ ಮಾಡಬೇಕು ಅಂತ,ಆದ್ರೆ ಅವ್ನಿಗೆ ಅದು ಇಷ್ಟ ಇರಲ್ಲ, ಆದ್ರೆ ಅವ್ನ ಪರಿಸ್ಥಿತಿ ಅವನನ್ನ ದ್ವಂದ್ವಕ್ಕೆ ತಲ್ಲತ್ತೆ.ದುಡ್ಡಿಗೋಸ್ಕರ ಇಂತಹ ಕೆಲಸ ಮಾಡಬೇಕಾ ಅಂತ..... ಅವ್ನು ಅದನ್ನ ತನ್ನ ಮಗನ ಹತ್ರ ಹೇಳ್ಕೊತಾನೆ.ಮಗ ತನ್ನ ತಂದೆ ದುಡ್ಡಿಗೋಸ್ಕರ ತನ್ನ ಆದರ್ಶನಾ, ತನ್ನ ಭಾವನೆಗಳನ್ನ ಬಳಿ ಕೊಡದು ಇಷ್ಟ ಪದೊದಿಲ್ಲ.ಅವ್ನು ಆ ರಿಯಲ್ ಎಸ್ಟೇಟ್ ಮನುಷ್ಯನ ವಿರುದ್ಧ್ಹ ಹೋರಾಟ ಮಾಡ್ತಾನೆ. ಅದ್ರಲ್ಲಿ ಜಯ ಗಳಿಸ್ತಾನೆ...
ಅವ್ನು ಜಯ ಗಳಿಸಕ್ಕು ನನ್ ಕನಸು ಮುಗ್ಯಕ್ಕು ಸರಿ ಆಯ್ತು. ಅಷ್ಟರಲ್ಲಿ ನಂಗೂ ಎಚ್ಚರ ಆಯ್ತು,ನೋಡ್ತೀನಿ ೯ ಘಂಟೆ ಆಗಿದೆ.ದಾದಾ ಬಡ ಅಂತ ಎದ್ದು ಓಡಿದೆ ,ಅಮ್ಮ ಕೂಗ್ತಾ ಇದ್ಲು ಬೇಗ ಎದ್ದು ರೆಡಿ ಆಗು, ಅಜ್ಜಿನ ನೋಡಕ್ಕೆ ಅತ್ತೆ ಮನೆಗೆ ಹೋಗ್ಬೇಕು ಅಂತ...
ಹೀಗೆ ಇವತ್ತಿನ ದಿನ(೨೩-೧೨-೦೮) ಶುರು ಆಗಿದ್ದು... ಆದ್ರೆ ತುಂಬ ಸಂತೋಷದ ಕ್ಷಣಗಳನ್ನ ಇವತ್ತು ಗಳಿಸ್ಕೊಂಡೆ...

11 comments:

ಮನಸ್ವಿ said...
This comment has been removed by the author.
ಮನಸ್ವಿ said...

ಹೋಯ್ ಭರ್ತಿ ಚನ್ನಾಗಿ ಬರದಿದ್ದೀಯಲ್ಲೇ ಹುಡುಗಿ... ನಿನ್ನ ಕನಸಿನ ಕಥೆ ತುಂಬಾ ಖುಷಿ ಕೊಟ್ಟಿತು ಹೀಗೆ ಬರೆಯುತ್ತಿರು..

Rajesh Manjunath - ರಾಜೇಶ್ ಮಂಜುನಾಥ್ said...

ಸಿಂಚನ,
ಬರಹದ ಎಳೆ ಇಷ್ಟವಾಯ್ತು. ಆದರೆ ಶಬ್ದ ಪ್ರಯೋಗದಲ್ಲಿ ಕಂಡೂ ಕಾಣದ ನಿರ್ಲಕ್ಷ ತೋರಿತು. ಲೇಖನಕ್ಕೆ ನ್ಯಾಯ ದೊರಕಿಸಿ ಕೊಡಬೇಕಾಗಿದ್ದು ಲೇಖಕರ ಜವಬ್ದಾರಿ. ಹೀಗೆಂದೇ ಎಂದು ಅನ್ಯಥಾ ಭಾವಿಸಬೇಡಿ.
-ರಾಜೇಶ್ ಮಂಜುನಾಥ್

Radhika Nadahalli said...

ಧನ್ಯಚಾದಗಳು. ಅದು ನಿರ್ಲಕ್ಷ್ಯವಲ್ಲ, ನನ್ನ ಮೊದಲ ಗದ್ಯ ಬರಹದ ಸಣ್ಣ ಪುಟ್ಟ ತಪ್ಪು ಹೆಜ್ಜೆಗಳು...ಸಲಹೆಗಳಿಗೆ ಸ್ವಾಗತ.

vinayak said...

ಕಥೆ ಚನ್ನಾಗಿದೆ. ಟೈಪಿಸುವಾಗ ಅಕ್ಷರಗಳ ಕಡೆ ಗಮನ ಕೊಡು. ಒಳ್ಳೆಯ ವಿಷಯವನ್ನೇ ಆಯ್ಕೆ ಮಾಡಿರುವೆ.
ಶುಭವಾಗಲಿ

Santhosh Rao said...

ಪರವಾಗಿಲ್ಲ ಕಂಡ್ರಿ .. ಕನಸು ಚೆನ್ನಾಗೆ ಕಾಣ್ತಿರ.. !!
ನಮಗೂ ಆಗಾಗ ಕನಸು ಬೆಳುತ್ತೆ .. ಎಲ್ಲಾ ಚಿಂದಿ ಚಿತ್ರಾನ್ನ ..

Ittigecement said...

ಸಿಂಚನಾ...

ನನ್ನ ತಂಗಿ " ವಾಣಿ" ನೆನಪಾದಳು...

ಬರಹ ಚಂದವಾಗಿದೆ..
ಇನ್ನೂ ಬರಿ...
ಅನುಭವಿಸಿ ಬರಿ..
ಎಲ್ಲ ಸರಿ ಆಗುತ್ತದೆ...

ನಾನೂ ಗುತ್ತಿಗೆದಾರ...
ಆದರೆ ನಿನ್ನ ಕನಸಿನಲ್ಲಿ ಬಂದವನ ಥರಹ "ಖಂಡಿತ " ಅಲ್ಲ...

ನಿನ್ನಣ್ಣ..

ಪ್ರಕಾಶಣ್ಣ..

Radhika Nadahalli said...

ಓಹ್ ಧನ್ಯವಾದಗಳು ಪ್ರಕಾಶಣ್ಣ :-)
ಖಂಡಿತ ಬರಿತಿ...

-ರಾಧಿಕಾ

Santhosh Rao said...
This comment has been removed by a blog administrator.
ಶರಶ್ಚಂದ್ರ ಕಲ್ಮನೆ said...

ನಿಮ್ಮ ಕನಸು ವಿಚಿತ್ರವಾಗಿದೆ :) ಕನಸು ಅಂದ್ರೆ ಹಾಗಲ್ವ? ಕಾಗುಣಿತದ ಕಡೆ ಸ್ವಲ್ಪ ಗಮನ ಇರಲಿ, ಮೊದಮೊದಲ ಕಷ್ಟವನ್ನು ಬಲ್ಲೆ, ನಮ್ಮ ಎಚ್ಚರಿಕೆಯೂ ಇರಬೇಕು ಎಂದು ನನ್ನ ಭಾವನೆ. ಇನ್ನೂ ಒಳ್ಳೆಯ ಲೇಖನಗಳು, ಬರಹಗಳು ನಿಮ್ಮಿಂದ ಬರಲಿ.

ಸಾಗರದಾಚೆಯ ಇಂಚರ said...

ನಿಮ್ಮ ಕನಸು ಸಾಗುತ್ತಿರಲಿ, ಸುಂದರವಾಗಿದೆ.

Powered By Blogger

Followers