Friday, September 11, 2009

ಸ್ವಯಂ ಬೀಳ್ಕೊಡುಗೆ

ವಿದಾಯ...ಹಾಗೆ ಸಣ್ಣದೊಂದು ನೋವು
ಅಲ್ಲ ವಿದಾಯ ಸಣ್ಣದಾಗಿ ಕಾಣಿಸುವ
ಆದರೆ ಆಳ ಅಗಲ ತಿಳಿಯದ
ಅಳತೆ ಮಾಡಲಾಗದ ಅನು-ಭಾವ!
ಮುಂದಿನ ಭೇಟಿಯವರೆಗೂ
ಮನಸ ಆವರಿಸುವ,ಉರಿಸುವ
ನೆನಪ ಸ್ಫುರಿಸುವ
ಆಗಾಗ ತಳಮಳ ಬರಿಸುವ
ವಿ-ವರಿಸಲಾಗದ ಮೌನ ಸೃಷ್ಟಿಸುವ ಪರ್ವ ಈ ವಿದಾಯ...

11 comments:

vinayak said...

ಅರ್ಥಪೂರ್ಣವಾಗಿದೆ....
ನೀನು blog ಲೋಕಕ್ಕೆ ಹೆಚ್ಚುದಿನ ವಿದಾಯ ಹೇಳದೇ, ಆಗಾಗ ಬರೆಯುತ್ತಿರು.

Ittigecement said...

ತುಂಬಾಅ ಚೆನ್ನಾಗಿದೆ...

ವಿದಾಯದ ವಿಮರ್ಶೆ, ತಳಮಳ..
ಚಂದವಾಗಿ ಶಬ್ಧಗಳಲ್ಲಿ ಬಿಡಿಸಿಟ್ಟಿದ್ದೀರಿ...
ಬಹಳ ಕಷ್ಟದ ಕೆಲಸ ಅದು..


ವಿದಾಯ ಮನಸ್ಸಿಗೆ ನೋವು ಕೊಡುವಂಥದ್ದು..

ಚಂದದ ಕವಿತೆಗೆ ಅಭಿನಂದನೆಗಳು..

ಆಗಾಗ ಬರೆಯುತ್ತಿರಿ..

ಮನಸ್ವಿ said...

ಭಾವ ಪೂರ್ಣವಾಗಿ ಮೂಡಿ ಬಂದಿದೆ..
ಚನ್ನಾಗಿ ಬರದ್ದೆ.. ಹೀಗೆ ಬರೆಯುತ್ತಿರು..
ಹೆಚ್ಗೆ ದಿನ ಕಾಯ್ಸಡ...

ಯಜ್ಞೇಶ್ (yajnesh) said...

ತುಂಬ ಚೆನ್ನಾಗಿ ಬರದ್ದೆ. ಮತ್ತೆ ಇದು ಬ್ಲಾಗಿಗೆ ವಿದಾಯವಾಗದಿರಲಿ

ಹೀಗೆ ಬರಿತಾ ಇರು

ಸಾಗರದಾಚೆಯ ಇಂಚರ said...

ವಿದಾಯ ಬೇಡಾ, ಚಂದದ ಕವಿತೆಗೆ ಅಭಿನದನೆಗಳು

ವಿನಾಯಕ ಕೆ.ಎಸ್ said...

ಕವನ ಚೆನ್ನಾಗಿದ್ದು. ಇದೇ ಪದಗಳನ್ನು ಇನ್ನೊಂದು ಒಂದೆರಡು ಹೆಚ್ಚು ಸಾಲಲ್ಲಿ ಹೇಳಿದ್ರೆ ಇನ್ನೂ ಚೆನ್ನಾಗಿತ್ತೇನೋ...ಪದಗಳನ್ನ ಸ್ವಲ್ಪ ತುರುಕಿದ ಹಾಗಾಗಿದೆ...
ಕೋಡ್ಸರ

Shashi Dodderi said...

nice to see you writing kannada good, quite impressive book list.... good nice poems....
shashi

Shashi Dodderi said...

nice to see you writing kannada good, quite impressive book list.... good nice poems....
shashi

ಗೌತಮ್ ಹೆಗಡೆ said...

chendada saalugalu:)

ಜಲನಯನ said...

ವಿದಾಯ-ಶುಭಪುನರ್ಮಿಲನಕ್ಕೆ ಎಂದಾದರೆ ಅಲ್ಪ ಅಗಲಿಕೆಯಲ್ಲೂ ಸುಖವಿರುತ್ತೆ ಅಲ್ವಾ? ಹಾಗೇ..ಮುಂದೆ ಸಿಗುವ ಮಿಲನದ ಯಾವುದೇ ಪೂರ್ವ ಯೋಜನೆಯಿಲ್ಲವಾದರೆ..ಅದು ಅಸಹನೀಯ ದುಃಖಕ್ಕೆ ಎಡೆಮಾಡಿಕೊಡುತ್ತೆ..ನಿಮ್ಮ ಸಾಲುಗಳಿಗೆ ಸತ್ವ ತುಂಬಿದ ಪದ ಬಳಕೆ ಇಷ್ಟವಾಯಿತು..ಬರೆಯುತ್ತಿರಿ ಆಗಾಗೆ...ಲೇಖನಿಯೂ ಕತ್ತಿಯಂತೆಯೇ..ಉಪಯೋಗಿಸದಿರೆ ಮೊಂಡಾಗಬಹುದು ತೀಕ್ಷ್ಣತೆ ..ಡೊಂಕಾಗಬಹುದು..

Anonymous said...

ವಿದಾಯಗಳು ಕೆಲವೊಮ್ಮೆ ’ಭಾರ’ ಅನ್ನಿಸಿಕೊಳ್ಳೋ ಅಕ್ಷರಗಳನ್ನ ಗೀಚಿಸಿಬಿಡುತ್ವೆ. ಭಾವನೆಗಳ ಸಂಕೀರ್ಣತೆಯನ್ನ ಕವನದ ರೂಪದಲ್ಲಿ ಕಟ್ಟಿದ್ದೀರಿ. nice lines..

Powered By Blogger

Followers