Sunday, March 1, 2009

ನಾಪತ್ತೆ-ಹೀಗೊಂದು ಪ್ರಕಟಣೆ!

ನಾನು ಬ್ಲಾಗ್ ಬರೆಯದೇ ತುಂಬ ದಿನವಾಯಿತು,ಬರೆಯಲು ಸಾಧ್ಯವಾಗಿಲ್ಲ ಎಂಬುದು ಕಾರಣ ಅಲ್ಲ,ಆದರೆ ಬರೆಯಲು ಶುರು ಮಾಡಿದ್ದನ್ನು ಪೂರ್ತಿ ಮಾಡಲು ಆಗಿಲ್ಲ...ಆದರೆ ಅಡಿಗರ ಜನ್ಮದಿನದ ಸಂದರ್ಭದಲ್ಲಿ ಅವರ ಕವನವನ್ನ ಇಲ್ಲಿ ಪ್ರಕಟಿಸಿದೆ...ಮೊದಲ ಕಾರಣ ಅವರ ಜನ್ಮದಿನ,ಎರಡನೆಯದು ನನ್ನ ಬ್ಲಾಗ್ ಅಪ್ಡೇಟ್ ಮಾಡುವುದು :-)

ಈಗಿನ ಬರಹದ ವಿಷಯ ಇದಲ್ಲ,ಆದರೂ ವಿಷಯ ಪ್ರಸ್ತಾಪ ಮಾಡಿದ್ದೇನೆ ಅಷ್ಟೆ...

ವಿಷಯ ಏನಪ್ಪಾ ಅಂದರೆ ನಾನು ಬ್ಲಾಗ್ ಪ್ರಾರಂಭ ಮಾಡಿ ಹತ್ರ ಹತ್ರ ೩ ತಿಂಗಳು ಆಗ್ತಾ ಬಂತು,ಈ ಅವಧಿಯಲ್ಲಿ ನನ್ನ ಬ್ಲಾಗ್ ಹಿಮ್ಬಾಲಿಸುವವರ ಸಂಖ್ಯೆ ೭ಕ್ಕೆ ತಲುಪಿದೆ...ಇದು ನನಗಂತೂ ಖುಷಿಯ ವಿಷಯ :-)
೧ರಿನ್ದ ಆರಂಭವಾದ ಹಿಂಬಾಲಕರ ಅಂಕಿ ಮೊನ್ನೆ ೭ಕ್ಕೆ ತಲುಪಿದಾಗ ನನಗೆ ಸಂತಸ ಆಗಿದ್ದು ಸುಳ್ಳಲ್ಲ...ಆದರೆ ನೆನ್ನೆ ನೋಡ್ತೀನಿ ಹಿಂಬಾಲಕರೆಲ್ಲ ನಾಪತ್ತೆ!! ಮತ್ತೊಮ್ಮೆ ಪರಿಶೀಲನೆ ಮಾಡಿದೆ,ಬಹುಶ ನಾನೇ ಸರಿಯಾಗಿ ನೋಡಿಲ್ಲವೇನೋ ಎಂದು,ಉಹು ಇಲ್ಲ ಎಲ್ಲೂ ಹಿಂಬಾಲಕರು ಕಾಣುತ್ತಿಲ್ಲ :(

ಇದು ಹೇಗಾಯಿತು ಯಾಕಾಯಿತು ನನಗೆ ಅರ್ಥವಾಗುತ್ತಿಲ್ಲ,ಒಟ್ಟಿನಲ್ಲಿ ಇದೊಂದು ನಿಗೂಢದಂತೆ ಭಾಸವಾಗುತ್ತಿದೆ!!
ತಾಂತ್ರಿಕ ದೋಷವಿರಬಹುದು...

ಇದನ್ನು ಓದಿದವರಲ್ಲಿ ಈ ಹಿಂದೆ ನನ್ನ ಬ್ಲಾಗ್ನ ಹಿಂಬಾಲಕರಾಗಿದ್ದವರು ಇದ್ದರೆ ,ಪುನಃ ಹಿಂಬಾಲಕರಾಗಬಹುದು...ಆಗದಿದ್ದವಾರು ಇನ್ನು ಮುಂದೆ ಇಷ್ಟವಾದರೆ ಆಗಬಹುದು.

-ಇಂತಿ ಸಿಂಚನ

8 comments:

ಮೂರ್ತಿ ಹೊಸಬಾಳೆ. said...

ಅದು ನಿಮ್ಮ ಡ್ಯಾಶ್ ಬೋರ್ಡ್ನಲ್ಲಿನ ತಾಂತ್ರಿಕ ದೋಷ ಇರ ಬಹುದು.
ನೀವು ಅಪ್ ಡೇಟ್ ಮಾಡಿದ ಪೋಸ್ಟ್ ಗಳು ನನ್ನ ಲಿಸ್ಟ್ ನಲ್ಲಿ ಅಪ್ ಡೇಟ್ ಆಗುತ್ತಿವೆ.
ಬರೆಯುತ್ತಿರಿ.

ಮನಸು said...

sinchana, nimma blogge nanna modala bheTi.. tumba chenagide nimma blog..

nimma nigoodate arthavagute aadare adu bari taantrika doshavaste kelavu samaya haage agute... mate sari hogutte...

Dr.Gurumurthy Hegde said...

Sinchana,

nimma blaag himbaalakaraagalu yavude option kanuttilla. hege agali heli,

ಅರಕಲಗೂಡುಜಯಕುಮಾರ್ said...

hi, I read ur blog accidentally...!
thanks for revealing adiga's poems.....
it gives freshness to us... keep on blogging on poems and current affairs, ur style of writing is good, once again thanks for giving good feel.
Jayakumar.C.,
Hassan.,
www.reporterjay.blogspot.com
reporterjk@rediffmail.com

Ittigecement said...

ಸಿಂಚನಾ..

ನೀವು ಬರೆಯಿರಿ..

ನಮ್ಮ ಪ್ರೋತ್ಸಾಹ ಇದ್ದೇ ಇದೆ..
ನಿಮ್ಮ ಬ್ಲಾಗಿನ ಬರಹಗಳು ನನಗೆ ತಕ್ಷಣ ಗೊತ್ತಾಗುತ್ತಿದೆ..

ತಾಂತ್ರಿಕ ದೋಷ ಇರಬಹುದೇನೋ..

ಸಧ್ಯದಲ್ಲೇ ಬರಹದ ನೀರೀಕ್ಷೆಯಲ್ಲಿರುವೆ...

ಶುಭಾಶಯಗಳು...

ಪ್ರಕಾಶಣ್ಣ..

ಶಿವಪ್ರಕಾಶ್ said...

ಸಿಂಚನ ಅವರೇ,
ನಿಮ್ಮ ಬ್ಲಾಗ್ ಹಿಂಬಾಲಿಸುವುದನ್ನು ಯಾರು ಬಿಟ್ಟಿಲ್ಲ..
ಕೆಲವು ದಿನಗಳ ಹಿಂದೆ google ನವರು ಕೆಲವು ಮಾರುಪಟುಗಳನ್ನು ಮಾಡಿದ್ದರೆ, ಅದರಿಂದಾಗಿ ನಿಮ್ಮ ಬ್ಲಾಗ್ ಹಿಂಬಾಲಕರು ನಿಮಗೆ ಕಾಣಿಸುತ್ತಿಲ್ಲ. ನಮಗೆಲ್ಲ ನಿಮ್ಮ ಬರಹಗಳ updates ದೊರಕುತ್ತಿವೆ. ಮತ್ತೊಮ್ಮೆ Followers Plugin add ಮಾಡಿ.

ಮನಸ್ವಿ said...

ಹ್ಮ್.. ಚನ್ನಾಗಿ ಬರೆದಿದ್ದೀಯ.. ಆದರೆ ನಿನ್ನ ಬೆಂಬಲಿಗರೆಲ್ಲರೂ ನಿನ್ನ ಬ್ಲಾಗ್ ಫಾಲೋ ಮಾಡುತ್ತಾ ಇದ್ದಾರೆ ನನ್ನನ್ನೂ ಸೇರಿ.. ಅದು ಗೂಗಲ್ ನವರು ಪ್ರಾಯೋಗಿಕವಾಗಿ ಕೊಟ್ಟಂತಹ ಸೇವೆ ಇದಾಗಿದ್ದು.. ಕೆಲವು ಬ್ಲಾಗ್ ಗಳಲ್ಲಿ ಇದು ನಾಪತ್ತೆಯಾಗಿದೆ.. ತಾಳ್ಮೆ ಇರಲಿ :)

Rajesh.Ediger said...

hii this blog is very nice ...keep it up....:)

Powered By Blogger

Followers