Thursday, March 26, 2009

ನೆನಪಿನ ತುಣುಕುಗಳು...

ಯುಗಾದಿಯ ಸಮಯದಲ್ಲಿ ಒಂದು ಪೋಸ್ಟಿಂಗ್ ಮಾಡಣ ಅಂತ ಅನ್ನಿಸ್ತು, ಆದರೆ ಹೊಸ ಬರಹ ಏನಲ್ಲ ಎಲ್ಲೋ ಬರೆದಿಟ್ಟಿದ್ದ ಕೆಲವು ಸಾಲುಗಳನ್ನೇ ಇಲ್ಲಿ ಪ್ರಕಟಿಸುತ್ತಿದ್ದೇನೆ,ಪ್ರಕಟಿಸುವ ಉತ್ಸಾಹಕ್ಕಾಗಿ... :-)


*ಕರಿ ನೆರಳಿನಿಂದ ದೂರ ಸರಿದು ಹೊಸ ಬೆಳಕ ಕಣ್ಣಲಿ ತುಂಬಿಕೊಳ್ಳಲು
ಜೀವನದ ಕನಸ ಕನಸಿಸಲು ಕೂಡಿ ಬಂದ ಸಮಯ...

*ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ ,ಇಂದಿಗೂ ಅದನ್ನು
ಜೀವಂತವಾಗಿರಿಸಲು ಉತ್ಸುಕಳಾಗಿರುವೆ,ಅದಕ್ಕಾಗಿ ಆಗಾಗ ನಿನ್ನ ಪ್ರತಿಕ್ರಿಯೆಯ ಬಯಸುತ್ತಿರುವೆ ...

*ಕಣ್ಣೊಳಗಿನ ಕನಸ ಕಣ್ಣ ಹೊಳಪಾಗಿಸು, ಬದುಕ ಬೆಳಕಾಗಿಸು
ಮನದೊಳಗಿನ ಪ್ರೀತಿಯ ಬದುಕ ಸ್ಫೂರ್ತಿಯಾಗಿಸು,ಜೀವನದ ಆದ್ಯತೆಯಾಗಿಸು...

*ಸೂರ್ಯರಶ್ಮಿ ಪ್ರಖರತೆ ಸಾಕೇ ಕಣ್ಣ ಪೊರೆ,
ತೆರೆಸಲು ಮನದ ಬಣ್ಣ ಅರಿಯಲು...
ಹಿತವಾದ ಎಲೆ ಬಿಸಿಲೋ ಅಥವಾ ಸುಡುವ ಬಿರು ಬಿಸಿಲೋ.....?
ಯಾವುದು ಚೆನ್ನ ನೀನೆ ಹೇಳು....

6 comments:

ಸಾಗರದಾಚೆಯ ಇಂಚರ said...

Dear Sinchana,

yugaadi habbada haardika shubhaashayagalu,

Guru

Radhika Nadahalli said...

ನಿಮಗೂ ಯುಗಾದಿಯ ಶುಭಾಷಯಗಳು

ಶರಶ್ಚಂದ್ರ ಕಲ್ಮನೆ said...

"ಕಳೆದ ಎಲ್ಲಾ ಕ್ಷಣಗಳ ಅದರಿಂದ ಗಳಿಸಿದ ನೆನಪ ಹರವಿ ಕುಂತಿರುವೆ" ಈ ಸಾಲುಗಳು ತುಂಬಾ ಇಷ್ಟ ಆದವು. ಬಹಳ ದಿನ ಆಗಿದ್ದವು, ನೀವು ಬರೆಯದೇ.. ಪ್ರಕಟಿಸುವ ಉತ್ಸಾಹಕ್ಕಾದರು ನಿಮ್ಮ ಒಂದು ಪೋಸ್ಟ್ ಬಂದದ್ದು ಸಂತೋಷ ತಂದಿತು. ಯುಗಾದಿಯ ಹಾರ್ದಿಕ ಶುಭಾಶಯಗಳು (ತಡವಾಗಿ.... )

- ಶರಶ್ಚಂದ್ರ ಕಲ್ಮನೆ

Radhika Nadahalli said...

ಥ್ಯಾಂಕ್ಸ್... :-) ಹೌದು ಸುಮಾರು ದಿನ ಆತು ಬರಿದೆ...ನಿನಗೂ ಯುಗಾದಿಯ ತಡವಾದ ಶುಭಾಶಯಗಳು ...

ಮನಸ್ವಿ said...

ಸಾಲುಗಳು ಸುಂದರವಾಗಿದ್ದು... ಹಿಂಗೆ ಅಪ್ಡೇಟ್ ಮಾಡ್ತಾ ಇರು ಬ್ಲಾಗ್ ನ :)

vaidehi said...

Hi Radhika,
Manada maatugala yaaraadaru shabdagallalli hididukottare anthaha baraha manasige tumba hattiravaaguttadante.Nimma blog tale baraha "maatu mounagala naduve" nannannu blogina olagade yenide antha yinuki nodalu prerepisitu. Uttama barahakke danyavaadagalu

Powered By Blogger

Followers