Thursday, April 1, 2010

ವಿಮೋಚನೆ

ಬಣ್ಣಗಳನು ನೋಡುವ ಹಂಬಲವಿತ್ತು ನನ್ನಲ್ಲಿ,
ಆದರೆ ಕಣ್ಣಿಗೆ ಪೊರೆ ಬಂದು
ಅವಕಾಶವಂಚಿತಳಾಗಿದ್ದೆ.
ಪೊರೆಯನು ತೆಗೆಯಲು ಕಾತುರಳಾಗಿದ್ದೆ
ಸಹಾಯ ಹಸ್ತಕಾಗಿ ಕಾಯುತಾ
ಆಶಾವಾದಿಯಾಗಿದ್ದೆ.
ಕೊನೆಗೂ ನನ್ನ ನಿರೀಕ್ಷೆ ಫಲಿಸಿತು:
ಆ ಅಮೃತ ಹಸ್ತ ಬಂದು ನನಗೊದಗಿದ್ದ
ತಾತ್ಕಾಲಿಕ ಪೊರೆಯನು
ಶಾಶ್ವತವಾಗಿ ನಾಶ ಮಾಡಿ ಬಣ್ಣದ ಲೋಕಕ್ಕೆ ಕರೆದೊಯ್ಯಿತು.
ಇಂತಹ ಸುಯೋಗವನು ನನ್ನ ಪಾಲಿಗೆ
ಹೊತ್ತು ತಂದ ಆ ಹೃದಯ
ಎಂದಿಗೂ ನನಗೆ ವಿಸ್ಮಯದ ಬಣ್ಣದ
ಲೋಕ...

( ಈ ವಾರದ ಮಣ್ಣಿನ ವಾಸನೆಯಲ್ಲಿ ಪ್ರಕಟವಾದ ಕವನ)

1 comment:

ಶರಶ್ಚಂದ್ರ ಕಲ್ಮನೆ said...

ಸಹಾಯ ಹಸ್ತ ಸಿಕ್ಕಿದ್ದು ಸಂತೋಷ... ಬಣ್ಣಗಳ ಲೋಕದಲ್ಲಿ ಕಳೆದು ಹೋಗಬೇಡಿ :) ಚಂದದ ಕವನ...

Powered By Blogger

Followers